Thursday, June 19, 2008

ಜೀವನದ ಒಂದು ಖುಷಿ

ಸ್ನೇಹಿತರೇ,
ನಾನು ನಿಮ್ಮೊಂದಿಗೆ ನನ್ನ ಜೀವನದ ಓಂದು ಸುಖದ ಮತ್ತು ಅದ್ಬುತವಾದ ಸಂಗತಿ ಹೇಳಲಿಕ್ಕೆ ಇಷ್ಟ ಪಡುತ್ತಿನಿ , ಆ ಆಷ್ಟೇ ಅಲ್ಲ ಈ ಷಣ ಮತ್ತೆ ಈ ಅನುಭವ ಎಲ್ಲರಿಗು ಸಿಗಲಿಕ್ಕೆ ಸಾಧ್ಯನೇ ಇಲ್ಲ ಎಷ್ಟು ಖುಷಿ ಆಗುತ್ತೆ ಈ ಅನುಭವ ನಿಮ್ಮ ಜೊತೆ ಹಂಚಿಕೊಳ್ಳಲಿಕ್ಕೆ .
ನಾನು ಈಗಿನ ದಿನಗಳಲ್ಲಿ ಅಮೇರಿಕ ದೇಶದಲ್ಲಿ ವಾಸವಾಗಿದಿನಿ . ಅಮೇರಿಕ ಅಂದರೆ ಗೊತ್ತಲ್ಲ ಪ್ರಪಂಚದ ಅತಿ ಬುದ್ದಿವಂತರು ಸೇರಿ ಸುಮಾರು ವರ್ಷಗಳ ಹಿಂದೆ ಕಟ್ಟಿದ ದೇಶ ಅದೇ ತರಹ ದೇಶನು ಕೂಡ ಪ್ರಪಂಚದ ಅತಿ ಬುದ್ದಿವಂತದ್ದು ಮತ್ತೆ ಅಷ್ಟೆ ಶ್ರೀಮಂತ ದೇಶ ಅಷ್ಟೆ ಸ್ವಚ್ಛತೆಯನ್ನು ಕಾಪಾಡಿಕೊಂಡಿರುವ ದೇಶ.
ಓಮ್ಮೆ ನನಗೆ ಈ ದೇಶದ ಮತ್ತೆ ಪ್ರಪಂಚದ ಅತಿ ಮುಂದುವರೆದ ಸಿಲಿಕಾನ್ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ನಿಜವಾಗಲು ತುಂಬಾನೇ ಖುಷಿ ಆಯಿತು ಅದನ್ನ ಹೇಳಲಿಕ್ಕೆ ಆ ಸಮಯದಲ್ಲಿ ನನಗೆ ಪದಗಳೇ ಸಿಗಲಿಲ್ಲ, ನನ್ನ ಪಯಣ ಶುರುವಾಗಿದ್ದು ಸಿಲಿಕಾನ್ ಪ್ರದೇಶದಿಂದ ಸುಮಾರು ಇಪ್ಪತ್ತು ಮೈಲಿ ದೂರದಲ್ಲಿ ಇರುವ ನನ್ನ ಮನೆ ಇಂದ ಇಲ್ಲಿನ ಪರಿಸರ ನೋಡಲಿಕ್ಕೆ ಒಂದು ಆನಂದ ಯಾವುದೇ ಕಾರಣಕ್ಕೂ ಬೇಜಾರ ಆಗೋದಿಲ್ಲ ಸರಿ ಸುಮಾರು ಇಪ್ಪತ್ತು ನಿಮಿಷ ನಡೆದರೆ ಅಲ್ಲಿ ಒಂದು ರೈಲ್ವೆ ನಿಲ್ದಾಣ ಎಷ್ಟು ನಿಶಬ್ದ ಎಲ್ಲರೂ ಅವರವರ ಕೆಲಸದಲ್ಲಿ ತೊಡಗಿರುತ್ತಾರೆ ಮತ್ತೆ ಯಾರಿಗಾದರೂ ಸಹಾಯ ಮಾಡಲಿಕ್ಕೂ ತಯಾರಾಗಿರುತ್ತಾರೆ. ಆ ರೈಲ್ವೆ ನಿಲ್ದಾಣ ವಂತೂ ಅದ್ಬುತ ಯಾರು ಅದರಲ್ಲಿ ಗಲಾಟೆ ನಡಿಸದ ಹಾಗೆ ರೈಲು ಬಂದ ತಷಣ ಹತ್ತಿಕೊಂಡು ಅದರಲ್ಲಿ ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ ಮತ್ತೆ ಅವರವರ ನಿಲ್ದಾಣ ಬಂದ ಷಣ ಗಲಾಟೆ ನಡೆಸದ ಹಾಗೆ ಇಳಿದು ಹೋಗ್ತಾರೆ. ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಸುತ್ತ ಮುತ್ತ ಬರಿ ಪರ್ವತಗಳು , ಸಮುದ್ರದ ಹಿನ್ನಿರಿನ ಪ್ರದೇಶಗಳು ಉಪ್ಪಿನ ಸುಂದರ ರಾಶಿಗಳು ಅಬ್ಬ ಇವುಗಳ ನಡುವಿನ ಪ್ರಯಾಣವಂತೂ ಅದ್ಬುತ ನಂತರ ಸಿಲಿಕಾನ್ ಪ್ರದೆಶದಲ್ಲೊಂದು ನಿಲ್ದಾಣ ಆ ನಿಲ್ದಾಣದಿಂದ ಹೊರನಡೆದರೆ ರೈಲ್ವೆ ಸಿಬ್ಬಂದಿ ನೇಮಿಸಿರುವ ಉಚಿತ ಬಸ್ಸಿನ ನಿಲ್ದಾಣ ಆ ಬಸ್ಸನ್ನೇರಿ ಮುನ್ನೇಡದರೆ ಪ್ರಯಾಣದ ದಾರಿಯುದ್ದಕ್ಕೂ ಅತಿ ಮುಂದುವರೆದ ಮಾಹಿತಿತಂತ್ರಜ್ಞಾನದ ದೊಡ್ಡ ದೊಡ್ಡ ಕಂಪನಿಗಳು ಅಬ್ಬ ಅವುಗಳನ್ನ ನೋಡಿದರೆ ನಿಜವಾಗಲು ಮೈ ಜುಮ್ಮೆನ್ನುತ್ತದೆ ನಿಜವಾಗಲು ಈ ಸೋಬಗನ್ನ ನೋಡಲಿಕ್ಕೆ ನಾನು ಪುಣ್ಯ ಮಾಡಿದ್ದೆ .
ದೇವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು ನಾನು ನನ್ನ ಅಮೇರಿಕ ಜೀವನದ ಅನುಭವವನ್ನ ಮುಂದೆ ಹಂಚಿ ಕೊಳ್ಳುತಿನಿ ...