Monday, June 9, 2008

ನಗು

ನಮಸ್ತೆ,

ನನ್ನ ಪರಿಚಯ ನಿಮಗೆ ಇದ್ದೆ ಇದೆ ನನ್ನದೊಂದು ಚಿಕ್ಕ ಕಥೆ, ಈ ಕಥೆ ನಾನು ನಿಮಗೆ ಹೇಳ್ತಾ ಹೋದರೆ ನಿಮಗೆ ಗೊತ್ತಗುತದೆ ನಾನು ಯಾರು. ನನ್ನದೊಂದು ಕೋರಿಕೆ ಯಾವುದೇ ಕಾರಣಕ್ಕೂ ನನ್ನ ಕಥೆ ಕೇಳಿ ನಗಬಾರದು ಆಗಿದ್ದರೆ ಕಥೆ ಶುರು ಮಾಡೋಣ
ನೀವು ಯಾರನ್ನೇ ಬೇಟಿಯಾದರೆ ಮೊದಲು ನಿಮ್ಮ ಮುಖದಲ್ಲಿ ಚಿಕ್ಕ ನಗು ! ಆ..ಆ ನಗುವಿನಲ್ಲಿ ಎಸ್ಟು ಅರ್ಥ ಓ ಅವರು ನನ್ನನ್ನು ಮಾತಾಡಿಸಲು ಬರುತ್ತಿದರೆ ಅನ್ನೋ ಭಾವನೆ ನಿಮ್ಮಲ್ಲಿ ಬರುತ್ತೆ ಅಂದರೆ ಆ ನಗುವಿನಿಂದ ಏನೋ ಒಂದು ಸಂಭಂದ ಬೆಳೆಯುತದೆ.

ನಗು ಅನ್ನೋದು ಎಸ್ಟು ಮುಖ್ಯ ಎಲ್ಲರ ಜೀವನದಲ್ಲಿ ಅಂಥ ಎಲ್ಲರಿಗೂ ಗೊತ್ಹು, ಚಿಕ್ಕ ಮಗುವಿಗೆ ಅಮ್ಮನ ನಗು ಕಂಡರೆ ಅಳು ಮಾಯ ಅದೇ ತರಹ ಜೀವನದಲ್ಲಿ ಎಸ್ಟೆ ನೋವಿನ ಸಂಗತಿ ಇರಲಿ ಅವನ್ನು ಈ ನಗು ಒಂದು ನಗು ಅನ್ನೋದರಿಂದ ಮುಚ್ಚಿ ಇಡಬಹುದು ಹೇಗೆಂದರೆ ಯಾರಿಗೆ ಯೇಸ್ತೆ ನೋವು ಇದ್ದರು ಯಾರಿಗೂ ಹೇಳದ ಸ್ಥಿತಿ ಇದ್ದರು ತನ್ನ ರೂಮು ನಲ್ಲಿ ಕೂತು ಆ ನೋವನೆಲ್ಲ ಅನುಭವಿಸಿ ಸಾಕಾಸ್ಟು ಅಳುತ್ತಿರುವಾಗ ಮನೆಗೆ ಆಕಸ್ಮಥಗಿ ಯಾರಾದ್ರೂ ಬಂದರೆ ತನ್ನೆಲ್ಲ ನೋವನ್ನ ರೂಮಿಗೆ ಸೀಮಿತ ಮಾಡಿ ಮನೆಗೆ ಬಂದವರ ಜೊತೆಗೆ ತನ್ನ ನೋವನ್ನ ತೋರಿಸಿಕೊಲ್ಲಬಾರದು ಅಂಥ ಮುಖದ ಮೇಲೆ ಒಂದು ನಾಟಕದ ನಗು .
ಆದರು ಈ ನಗು ನಾಟಕವಾದರೂ ಎಸ್ಟು ಸೇವ್ ಮಾಡುತ್ತೆ ಆದರೆ ಈ ನಗು ಕೇವಲ ವರ್ಥಮಾನಕ್ಕೆ ಅಸ್ಟೇ ಆದೆ ತರಹ ಎಸ್ಟೆ ದುಃಖ ಭರಿತ ಸಿನಿಮಾ ನೋಡ್ತಾ ಇದ್ದರು ಎಸ್ಟೆ ಕಣ್ಣಲ್ಲಿ ನೀರು ಬಂದರು ಒಂದೇ ಒಂದು ಚಿಕ್ಕ ತಮಾಷೆ ಇಂದ ಬರುವ ನಗು ಆಗಿನ ದುಃಖ ಮರೆಸುತ್ತೆ .
ಈ ನಗುವಿನಿಂದ ಖುಷಿ ಸಿಗುತ್ತೆ ,ನೆಮ್ಮದಿ ಹೆಚ್ಚುತ್ತೆ ಮತ್ತೆ ಆಯಸ್ಸು ಹೆಚ್ಚಾಗುತ್ತೆ ಯಾಕೆಂದರೆ ಜಾಸ್ತಿ ನಕ್ಕಷ್ಟು ಮನುಷ್ಯ ACTIVE ಆಗ್ತಾನೆ ಅದಕ್ಕೆ ಅಂಥ ಎಷ್ಟೋ ಹೊಸ ವ್ಯಾಯಾಮಗಳು ಶುರು ಅಗಿದವೇ.
ನನ್ನ ಕಥೆ ಕೇಳಿದ ಮೇಲೆ ಗೊತ್ತಾಗಿರಬೇಕು ನಾನು ಯಾರು ನನ್ನ ಹೆಸರು ಏನೆಂದು?, ಆ "ನಗು" ಅಂಥ ನನ್ನ ಹೆಸರು.
ಇಗ ನೀವೆಲ್ಲ ನಗುತ್ತಿದಿರಿ ನನ್ನ ಕಥೆ ಕೇಳಿ.
ಒಂದು ಅಂತು ನಿಜ ಜೀವನದಲ್ಲಿ ನಗಿಸುವುದು ತುಂಬಾನೇ ಕಷ್ಟ ಯಾರೇ ಆಗಲೀ ಬೀರೆಯವರನ್ನ ತುಂಬಾ ನಗಿಸ್ತಿದರೆ ಅಂದರೆ ಆವರ ಜೀವನದಲ್ಲಿ ಸಾಕಷ್ಟು ದುಃಖ ಅನುಭವಿಸಿರುತ್ತಾರೆ . ನನ್ನ ಸಲಹೆ ಯಾವಾಗಲು ನಗುತ್ತ ಇರಿ ಮತ್ತೆ ನನ್ನ ಕಥೆ ಓದಿ ಒಂದು ಒಳ್ಳೆ ನಗು ಕೊಡಿ.