Thursday, September 4, 2008

ಹಸ್ಯಕಾರರ ಚುಟುಕುಗಳು

ಸ್ನೇಹಿತರೇ,

ನಗುವಿನ ಕೆಲವು ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿತ್ತೇನೆ. ಆ ಆದರೆ ಇವು ಕೆಲವು ಹಸ್ಯಕಾರರ ತುಣುಕುಗಳು.

--ಬ್ಯಾಂಕಿನ ಕ್ಯಾಶ್ ಕೌಂಟರ್ ನಲ್ಲಿರುವ ಹುಡುಗಿ ಕೊಂಚವೂ ನಗದು,
ಬ್ಯಾಂಕಿನ ಕ್ಯಾಶ್ ಕೌಂಟರ್ ನಲ್ಲಿರುವ ಹುಡುಗಿ ಕೊಂಚವೂ ನಗದು,
ಅದಕ್ಕೆ ಅವಳ ಕುರ್ಚಿಯ ಮುಂದಿರುವ ಬೋರ್ಡ್ "ಕ್ಯಾಶ್ ನಗದು ".


--ಗಂಡ ಹೆಂಡತಿಯ ನಡುವಿನ ಸಂವಾದ,
ಗಂಡ : ಪ್ರೀಯೆ, ಹೊರಟಿರುವೆ ನಾ ಕವಿಗೊಸ್ಟಿಗೆ!
ಹೆಂಡತಿ : ಇದರಲ್ಲೇನು ವಿಶೇಷ?
ಗಂಡ :ಪ್ರೀಯೆ, ಹೊರಟಿರುವೆ ನಾ ಕವಿಗೊಸ್ಟಿಗೆ ಬಲ್ಲೆಯಾ ನಾ ಓದುವ ಕವನ!
ಹೆಂಡತಿ :ಏನು ಹೇಳಿರಿ ?
ಗಂಡ :ಎಲ್ಲರೂ ಇರು , ಎಂತಾದರು ಇರು ......
ಹೆಂಡತಿ :ಎಲ್ಲಾದರು ಇರು ,ಎಂತಾದರು ಇರು ,ರಾತ್ರಿ 10 ಗಂಟೆಗೆ ಮನೆಗೆ ಇರು!


---ಶ್ರೀ ಕೃಷ್ಣಾ ಸಂಧಾನ ನಾಟಕದ ಒಂದು ಸಂವಾದ.
ದುರ್ಯೋಧನ ದ್ರುತರಾಷ್ಟ್ರನನ್ನು ಒಳಗೆ ಕರೆಯುವ ಪ್ರಸಂಗ .

ದುರ್ಯೋಧನ: ಅಪ್ಪ, ತಂದೆ ಒಳಗೆ ಬಾ.
ನಾಟಕದ ಮಾಸ್ತರ್ :ಅಪ್ಪ,ತಂದೆ ಎರಡರ ಅರ್ಥ ಒಂದೇ ಯಾವುದಾದರೊಂದನ್ನು ಬಳೆಸು ಎಂದರು.
ದುರ್ಯೋಧನ :ಅಪ್ಪ ,ತಂದೆ ಎರಡು ಒಂದೇ ಒಳಗೆ ಬಾ.


---ಒಬ್ಬ ಹಳ್ಳಿ ಹೆಂಗಸು ಡಾಕ್ಟರ್ ಬಳಿ ಬಂದಾಗ
ಡಾಕ್ಟರ್ : ಏನಾಗಿದೆ ಅಮ್ಮ ನಿನಗೆ?
ಹೆಂಗಸು :ಭೇದಿ ಹತ್ತಿದೆ.
ಡಾಕ್ಟರ್ :ಭೇದಿ ಹೇಗಾಗುತ್ತದೆ?
ಹೆಂಗಸು :ಚಂಬು ಉರುಡಿಸಿದ ಹಾಗೆ.
ಡಾಕ್ಟರ್ :ದಿನಕ್ಕೆ ಎಷ್ಟು ಬಾರಿ ಹಾಗುತ್ತದೆ?
ಹೆಂಗಸು:ತೊಳೆದ ಕೈ ಒಣಗುವುದಿಲ್ಲ.


---ಬಸ್ಸಿನಲ್ಲಿ ಒಬ್ಬ ಮುದುಕ ಯುವಕನಿಗೆ ಸೀಟ್ ಕೇಳುವಾಗ,
ಮುದುಕ: ದಯಾ ಬೇಕು ಸಕಲ ಜೀವಗಳಲ್ಲಿ
ದಯಾ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ

ಯುವಕ: ಎಮ್ಮ ಚಿಂತೆ ಎಮಗೆ ಸಾಕಯ್ಯ
ಪರರ ಚಿಂತೆ ನಮಗ್ಯಾಕೆ ಬೇಕಯ್ಯ



---ಒಬ್ಬ ಯುವಕ ಹುಡುಗಿಯನ್ನು ನೋಡಿ ಹೀಗೆ ಹೇಳಿದ
ಹುಡುಗಿ,
ನಿನ್ನ ಮುಖ ಸೇಬು
ನಿನ್ನ ಮುಖ ಸೇಬು
ಆದರೆ ಮೊಡವೆಗಳಾಗಿ ಅದು ಸಿತಾಪಲ .


---ಒಂದು ಬಿಲ್ದಿಂಗಿನಲ್ಲಿ ನಡೆದದ್ದು
ಮೇಲಿಂದ ಯಾರೋ ಉಗುಳಿದ.
ಕೆಳಗೆ ನಿಂತವ ಅವನಿಗೆ ಹೇಳಿದ ಸ್ವಲ್ಪ ನೋಡಿ ಉಗುಳು.
ಮೇಲಿನವ ಕೆಳಗಿವನನ್ನು ಸ್ವಲ್ಪ ಹೊತ್ತು ನೋಡಿದ ಮತ್ತೆ ಅವನ ಮೇಲೆ ಉಗುಳಿದ .

---ಗಂಡ ಹೆಂಡತಿಯನ್ನು ಪರಿಚಯ ಬಗೆ
ಅವಳು ಆ ದಿನ ರಸ್ತೆಯಲ್ಲಿ ಸಿಕ್ಕಳು
ಅವಳು ದಿನ ರಸ್ತೆಯಲ್ಲಿ ಸಿಕ್ಕಳು, ನನ್ನ ನೋಡಿ ನಕ್ಕಳು
ನಮಗೆ ಈಗ ಇಬ್ಬರು ಮಕ್ಕಳು.